"ರಾಷ್ರ್ಟೀಯ ಸಂವಿದಾನ ದಿನಾಚರಣೆ"

ನೆಹರು ಯುವಕೇಂದ್ರ.ಚಿಕ್ಕಮಗಳೂರುˌ ಜನಚಿಂತನ ಸಂಸ್ಥೆ.ತರೀಕೆರೆˌ ಹೊಂಗಿರಣ ಫೌಂಡೇಷನ್.ತುಮಕೂರು ಹಾಗೂ ಕನ್ನಡ ಯುವಕ ಸಂಘದ ವತಿಯಿಂದ "ರಾಷ್ರ್ಟೀಯ ಸಂವಿದಾನ ದಿನಾಚರಣೆ"ಯನ್ನು ತರೀಕೆರೆ ತಾಲ್ಲೂಕಿನ ಕಣಬಗಟ್ಟೆ ಗ್ರಾಮದಲ್ಲಿ ಆಚರಿಸಲಾಗಿತು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಜನಚಿಂತನ ಸಂಸ್ಥೆಯ ವೀರಬದ್ರಪ್ಪನವರು ಮಾತನಾಡಿದರು ನಮ್ಮ ಸಂವಿದಾನದ ರಚನೆಯು ನವಭಾರತದ ಜನರ ಚಿಂತನೆಗೆ ನೂತನ ಸ್ಪರ್ಶವನ್ನು ನೀಡಿದವು ಸಬಲರು ದುರ್ಬಲರು ಉಳ್ಳವರು ಇಲ್ಲದವರು ಎಂಬ ಅಸಮಾನತೆಯನ್ನು ತೊಡೆದುಹಾಕುವಲ್ಲಿ ಯಶಸ್ಟಿಯಾಗಿದೆ ಅತೀ ಹಿಂದುಳಿದ ಹಾಗೂ ಶೋಷಿತ ವರ್ಗಗಳ ಏಳ್ಗೆಯನ್ನು ಸಾದಿಸಿ ಸಮಾನತೆಯನ್ನು ತರಲು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿತು ಹಾಗೇ ಜನರ ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ ಉದ್ದೇಶಪೂರ್ವಕವಾಗಿ ಯಾವುದೇವ್ಯಕ್ತಿಯಬಗ್ಗೆ ರುಣಾತ್ಮಕವಾಗಿ ಮಾತನಾಡಿದರೆ ಅವರ ವಿರುದ್ದ ಮಾತನಾಡುವುದು ಕಾನೂನಿನ ಪ್ರಕಾರ ಅಫರಾಧವಾಗುತ್ತದೆˌ ಪ್ರತಿಯೋರ್ವರಿಗೂ ತಮ್ಮ ನಿಲುವನ್ನು ವ್ಶಕ್ತಪಡಿಸುವ ಅಧಿಕಾರವಿದೆ ಇದನ್ನು ಇತರರು ಮತ್ಸರದ ಭಾವನೆ ತೋರದೆ ಅವರ ನಿಲುವನ್ನು ಸ್ಟಾಗತಿಸಬೇಕುˌ ಇದೇವೇಳೆಯಲ್ಲಿ ಮಹಾತ್ಮ ಗಾಂಧೀಜಿಯವರನ್ನು ಗೂಡ್ಸೆಯವರು ಗುಂಡಿಟ್ಟು ಕೊಂದಿದ್ದು ಅಭಿವ್ಯಕ್ತಿ ಸ್ಟಾತಂತ್ರ್ಯದ ಹರಣ ಎಂದು ಬಣ್ಣಿಸಿದರು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಜುಳ ರವರು ಪ್ರತೀ ಗ್ರಾಮಸ್ತರೂ ಸಂವಿದಾನದ ಮೂಲಭೂತ ಅಂಶಗಳನ್ನು ತಿಳಿದು ಇತರರಿಗೂ ತಿಳಿಸುವಂತಾಗಬೇಕೆಂದು ತಿಳಿಸಿದರು.
 ನಂತರ ಶಾಲೆಯ ಶಿಕ್ಷಕಿಯಾದ ಅಕ್ಕಮಹದೇವಿಯವರು ಮಾತನಾಡಿ ನಮ್ಮಲ್ಲಿನ ಜಾತೀಯತೆಯು ನಮ್ಮ ಏಕತೆ ಸಾಧಿಸುವ ಹಾಧಿಯ ದೊಡ್ಡಮುಳುವಾಗಿದ್ದು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಏಳ್ಗೆಯನ್ನು ಹೊಂದಲು ತೊಡಕಾಗಿದ್ದು ಅಭಿವ್ರುದ್ದಿಯ ವೇಗವನ್ನು ಸೀಮಿತಗೊಳಿಸಿದೆ ಎಂದು ಸ್ಮರಿಸಿದರು ನಂತರ ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿಗಳಾದ ಕೀರ್ತಿರಾಜ್ ರವರು ಮಾತನಾಡಿ ಅಂಬೇಡ್ಕರ್ ರವರು ನಮಗೆ ಅತ್ಶಮೂಲ್ಯವಾದ ದೊಡ್ಡ ಸಂವಿಧಾನವನ್ನು ನೀಡಿದ್ದು ಮೀಸಲಾತಿಯನ್ನು ಸೀಮಿತ ಅವಧಿಗೆ ಮಾತ್ರ ನೀಡಿದ್ದರು ನಂತರ ಅವರ ಆರ್ಥಿಕ ಸ್ವಾವಲಂಭನೆಯನ್ನು ಸಾಧಿಸಲು ಅನುಕೂಲ ಮಾಡಿಕೊಡುವುದು ಅವರ ಅಭಿಪ್ರಾಯವಾಗಿತ್ತು ಆದರೆ ನಮ್ಮ ರಾಜಕಾರಣಿಗಳು ವೋಟ್ ಬ್ಯಾಂಕಿಂಗ್ ರಾಜಕಾರಣವನ್ನು ಮಾಡುತ್ತಿವೆ ಎಂದು ವಿಷಾಧಿಸಿದರು ಆದುನಿಕ ಸ್ಪರ್ದಾತ್ಮಕ ಜಗತ್ತಿಗೆ ಇದು ಮಾರಕ ಹಾಗೂ ಪ್ರತಿಭಾವಂತರ ಮನಸ್ಸಿನಲ್ಲಿಯೂ ನಿರಾಶವಾದದ ಭಾವನೆಯನ್ನು ಬಿತ್ತುತ್ತದೆ ಆದುನೀಕತೆಗೆ ತಕ್ಕಂತೆ ನಮ್ಮ ಸಂವಿದಾನವನ್ನು ಮಾರ್ಪಡಿಸಬೇಕಿದೆ ನಮ್ಮ ಸಂವಿದಾನ ಧಲಿತರ ಶೈಕ್ಷಣಿಕ ಮೀಸಲಾತಿಯನ್ನು ನಿಲ್ಲಿಸಿ ಅವರ ಆರ್ಥಿಕ ಅಭಿವ್ರುದ್ದಿಯತ್ತ ಗಮನಹರಿಸಬೇಕಿದೆ ಎಂದು ಸ್ಮರಿಸಿದರು
 ಅಂತಿಮವಾಗಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಂಳಂಶುಪಾಲರಾದ ಸಿದ್ದರಾಮಪ್ಪನವರು ಕಾರ್ಯಕ್ರಮದ ಆಯೋಜನೆಯ ಕುರಿತು ಸಂತಸ ವ್ಯಕ್ತಪಡಿಸಿದರು ನಮ್ಮ ಯುವಜನತೆಯು ಇದರ ಕುರಿತು ಜಾಗ್ರುತರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಸವಿತಾ ರವರು ಸ್ಟಾಗತಿಸಿ ಹಾಗೂ ನಿರೂಪಿಸಿದರುˌ ಕೀರ್ತಿರಾಜ್ ರವರು ವಂದನಾರ್ಪಣೆ ಮಾಡಿದರು.
hfgroup360.blogspot.com

Comments

Popular posts from this blog

"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"

"ಅಂತರ ಯುವ ಸಂಘಗಳ ಕ್ರೀಡಾಕೂಟ"